{"product_id":"channemane-kalisida-paatha-namma-aata-namma-jaanme","title":"ಚನ್ನೆಮಣೆ ಕಲಿಸಿದ ಪಾಠ – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 1","description":"\u003cp\u003e🎉 ಕನ್ನಡ ರಾಜ್ಯೋತ್ಸವ ವಿಶೇಷ!\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಕಾವೇರಿ ತೀರದ ಒಂದು ಊರು. ಕೃಷ್ಣೇಗೌಡ್ರ ಹೊಲದಲ್ಲಿ ಪ್ರತೀ ವರ್ಷ ಭರ್ಜರಿ ಬೆಳೆ. ಊರಿಗೆಲ್ಲ ಊಟ, ಬಂದೋರಿಗೆಲ್ಲ ಔತಣ… ಆದ್ರೆ ಕೆಲವೇ ತಿಂಗಳಲ್ಲಿ ಕಣಜ ಖಾಲಿ! 😱\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eನೂರು ಚೀಲ ಬೆಳೆ ಬಂದ್ರೂ ಬಿತ್ತನೆಗೆ ಹತ್ತು ಚೀಲ ಉಳಿಯಲ್ಲ ಯಾಕೆ?\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಆಗ ಮನೆಗೆ ಬರ್ತಾಳೆ ಹೊಸ ಸೊಸೆ ಲಕ್ಷ್ಮಿ – ಮಾತು ಕಮ್ಮಿ, ಜಾಣ್ಮೆ ಜಾಸ್ತಿ. ಅವಳ ಉಪಾಯ? ಅಜ್ಜಿ ಜೊತೆ ಆಡೋ ಒಂದು ಚನ್ನೆಮಣೆ! ಹದಿನಾಲ್ಕು ಗುಳಿಗಳಲ್ಲಿ ಇಡೀ ಮನೆಯ ಲೆಕ್ಕ ಹೇಗೆ ಬದಲಾಯ್ತು, ಆ ಸುದ್ದಿ ರಾಜನ ಅರಮನೆವರೆಗೂ ಹೇಗೆ ಹೋಯ್ತು ಅನ್ನೋದೇ ಈ ಕಥೆ.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e“ಆಟದಲ್ಲಿ ಮುಂದಿನ ನಡೆ, ಬದುಕಿನಲ್ಲಿ ಮುಂದಿನ ಬೆಳೆ!”\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e📖 ಕಾಮಿಕ್ ಬಗ್ಗೆ\u003c\/p\u003e\n\u003cp\u003e• ಪೂರ್ತಿ ಬಣ್ಣದ ಚಿತ್ರಗಳು, ಸರಳ ಆಡು ಮಾತಿನ ಕನ್ನಡ\u003c\/p\u003e\n\u003cp\u003e• ಮಕ್ಕಳು, ಅಪ್ಪ-ಅಮ್ಮ, ಅಜ್ಜ-ಅಜ್ಜಿ – ಎಲ್ಲರೂ ಒಟ್ಟಿಗೆ ಓದಬಹುದು\u003c\/p\u003e\n\u003cp\u003e• ನಮ್ಮ ಪರಂಪರೆಯ ಅಳಗುಳಿ ಮಣೆ (ಚನ್ನೆಮಣೆ) ಆಟದಿಂದ ಉಳಿತಾಯ, ಯೋಜನೆಯ ಪಾಠ\u003c\/p\u003e\n\u003cp\u003e• \"ನಮ್ಮ ಆಟಗಳು – ನಮ್ಮ ಜಾಣ್ಮೆ\" ಸರಣಿಯ ಮೊದಲ ಸಂಚಿಕೆ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e📥 ಹೇಗೆ ಸಿಗುತ್ತೆ?\u003c\/p\u003e\n\u003cp\u003e• ಇದು ಡಿಜಿಟಲ್ PDF – ಪ್ರಿಂಟ್ ಪುಸ್ತಕ ಅಲ್ಲ\u003c\/p\u003e\n\u003cp\u003e• ಆರ್ಡರ್ ಆದ ಮೇಲೆ ಡೌನ್‌ಲೋಡ್ ಲಿಂಕ್ ನಿಮ್ಮ ಇಮೇಲ್‌ಗೆ ಬರುತ್ತೆ\u003c\/p\u003e\n\u003cp\u003e• ಫೋನ್, ಟ್ಯಾಬ್, ಕಂಪ್ಯೂಟರ್ – ಎಲ್ಲದರಲ್ಲೂ ಓದಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e🎲 ಕಥೆ ಓದಿದ್ಮೇಲೆ ಆಟ ಆಡೋಕೆ ಮನಸ್ಸಾಯ್ತಾ?\u003c\/p\u003e\n\u003cp\u003eನಮ್ಮ ಅಳಗುಳಿ ಮಣೆ ಸೆಟ್‌ಗಳನ್ನ ನೋಡಿ, ಅಥವಾ TolluGatti ಆ್ಯಪ್‌ನಲ್ಲಿ ಉಚಿತವಾಗಿ ಕಲಿತು ಆಡಿ: tollugatti.com\/app\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಎಲ್ರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e—\u003c\/p\u003e\n\u003cp\u003eIn English: A full-colour Kannada comic (digital PDF) for Karnataka Rajyotsava. A clever new daughter-in-law uses the traditional Aliguli Mane (Channe Mane) board game to teach her family how to save and plan their harvest. Episode 1 of the \"Namma Aatagalu – Namma Jaanme\" series by Roll the Dice. Suitable for all ages.\u003c\/p\u003e","brand":"Roll the Dice","offers":[{"title":"Default Title","offer_id":67855979905338,"sku":null,"price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0700\/1692\/6010\/files\/1000531631.jpg?v=1793505966","url":"https:\/\/rollthedice.in\/kn\/products\/channemane-kalisida-paatha-namma-aata-namma-jaanme","provider":"Roll the Dice","version":"1.0","type":"link"}