ಕವಡೆ ಹೇಳಿಕೊಟ್ಟ ಮಾರ್ಕೆಟಿಂಗ್ ಪಾಠ | Kannada Comic – Episode 3 (Free PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 3
ಕವಡೆ ಹೇಳಿಕೊಟ್ಟ ಮಾರ್ಕೆಟಿಂಗ್ ಪಾಠ | Kannada Comic – Episode 3 (Free PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 3
Share
Couldn't load pickup availability
100%SECURED
SHIPPING
7 DAYSRETURN / REPLACEMENT
MADEWITH
LOVE
TRUSTEDONLINE
SELLER
Product Description
Product Description
ನಮ್ಮ ಆಟಗಳು – ನಮ್ಮ ಜಾಣ್ಮೆ · ಸಂಚಿಕೆ 3 (ಕೊನೆಯ ಸಂಚಿಕೆ)
ಬೆಂಗಳೂರಿನ ನಿಖಿಲ್ಗೆ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಲ್ಲಿ ಹೊಸ ಕೆಲಸ ಸಿಕ್ಕಿದೆ. ಆದರೆ ಮೊದಲ ದಿನವೇ ಸವಾಲು: ಮೂವತ್ತು ದಿನ, ಚಿಕ್ಕ ಬಜೆಟ್, ದೊಡ್ಡ ಟಾರ್ಗೆಟ್! 😰
ಅದೇ ಸಂಜೆ ಅಜ್ಜ-ಅಜ್ಜಿ ಜೊತೆ ಚೌಕಬಾರ ಆಡ್ತಿರುವಾಗ ಅಜ್ಜ ಹೇಳ್ತಾರೆ:
"ಕವಡೆ ಹೇಗೆ ಬೀಳುತ್ತೆ ಅನ್ನೋದು ನಮ್ಮ ಕೈಯಲ್ಲಿಲ್ಲ. ಆದರೆ ಯಾವ ಕಾಯಿ ನಡೆಸಬೇಕು ಅನ್ನೋದು ನಮ್ಮ ಕೈಯಲ್ಲೇ ಇದೆ!" 🐚
ಚೌಕಬಾರ ಕಲಿಸಿದ್ದು ಎಲ್ಲ ಕಾಯಿಗಳನ್ನೂ ಒಂದೇ ಸಲ ಅಪಾಯಕ್ಕೆ ತಳ್ಳಬಾರದು ಅನ್ನೋದನ್ನ. ಪಗಡೆ ಕಲಿಸಿದ್ದು ಒಂದೇ ಕಾಯಿಯನ್ನ ನಂಬಿ ಕೂರದೆ, ಎಲ್ಲ ಕಾಯಿಗಳ ಮೇಲೂ ಕಣ್ಣಿಡಬೇಕು ಅನ್ನೋದನ್ನ. ಈ ಎರಡು ಪಾಠಗಳಿಂದ ನಿಖಿಲ್ ದೊಡ್ಡ ಜಾಹೀರಾತಿಲ್ಲದೆ ಸ್ಕೂಟರ್ನ್ನ ಜನರ ಬಳಿಗೇ ತಗೊಂಡು ಹೋಗ್ತಾನೆ. ಕೊನೆಗೆ ಆಫೀಸ್ನಲ್ಲೇ ಚೌಕಬಾರ ಕ್ಲಾಸ್ ಶುರುವಾಗುತ್ತೆ! 😄
ಈ ಕಾಮಿಕ್ನಲ್ಲಿ:
- 🎲 ಚೌಕಬಾರ ಮತ್ತು ಪಗಡೆ ಆಟಗಳ ಜಾಣ್ಮೆ
- 💡 ಕಡಿಮೆ ಖರ್ಚಿನಲ್ಲಿ ಜಾಣ ಯೋಜನೆ: ಚಿಕ್ಕ ಪ್ರಯೋಗಗಳು, ಸರಿಯಾದ ನಡೆ
- 👨👩👦 ಅಜ್ಜ-ಅಜ್ಜಿ ಮತ್ತು ಮೊಮ್ಮಗನ ನಡುವಿನ ಬೆಚ್ಚನೆಯ ಕಥೆ
- 📖 ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಎಲ್ಲರಿಗೂ!
ವಿವರ:
- ಭಾಷೆ: ಕನ್ನಡ
- ಫಾರ್ಮ್ಯಾಟ್: ಡಿಜಿಟಲ್ PDF (7 ಪುಟಗಳು, ಬಣ್ಣದ ಚಿತ್ರಗಳು)
- ಬೆಲೆ: ಉಚಿತ 🎉
- ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ನಲ್ಲಿ ಓದಬಹುದು
ಕಾಮಿಕ್ ಓದಿದ ಮೇಲೆ ಮನೆಯವರೆಲ್ಲ ಸೇರಿ ಆಡೋಣ! ನಮ್ಮ ಚೌಕಬಾರ ಮತ್ತು ಪಗಡೆ ಸೆಟ್ಗಳು rollthedice.in ನಲ್ಲಿ ಲಭ್ಯ. ಆಟ ಕಲಿಯೋಕೆ TolluGatti ಆ್ಯಪ್ (Google Play ನಲ್ಲಿ ಉಚಿತ) ಬಳಸಿ.
ಸರಣಿಯ ಇತರ ಸಂಚಿಕೆಗಳು (ಉಚಿತ):
ಸಂಚಿಕೆ 1: ಚನ್ನೆಮಣೆ ಕಲಿಸಿದ ಪಾಠ · ಸಂಚಿಕೆ 2: ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ!
English: Episode 3 (the final episode) of our Kannada comic series “Namma Aatagalu – Namma Jaanme”. Nikhil, a young marketing executive in Bengaluru, has 30 days and a tiny budget to launch an electric scooter. Evenings of Chowka Bara and Pagade with his grandparents teach him the strategy he needs. Free 7-page digital PDF.
What's Inside The Box
What's Inside The Box
How To Play
How To Play
Shipping Info
Shipping Info
Enjoy Shipping-Free Shopping Across India with Every Order.


